Opening Ceremony

ಕ್ಯಾನ್ಸರ್ ಆರೈಕೆ ಮಾಡುವವರ ಬೆಂಬಲಕ್ಕೆ ಲಕ್ಷೀಶ ಫೌಂಡೇಷನ್‍ ಸಂಸ್ಥೆ ಕಾರ್ಯಾರಂಭ ಮಾಡಿದೆ. ಕ್ಯಾನ್ಸರ್ ಹಾಗೂ ದೀರ್ಘಕಾಲೀನ ಕಾಯಿಲೆಯಿಂದ ಬಳಲುವವರಲ್ಲಿ ಸಾಂತ್ವನ ಹಾಗೂ ಭಾವನಾತ್ಮಕ ಬೆಂಬಲ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು, ಆರೈಕೆ ಮಾಡುತ್ತಿರುವವರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನೂ ಕಾಪಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶಗಳಲ್ಲಿಒಂದಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಕ್ಯಾನ್ಸರ್ ತಜ್ಞ ಡಾ.ಕೆ.ಆರ್.ಮಾಧವ ಅವರು ಮಾತನಾಡುತ್ತಾ “ಕ್ಯಾನ್ಸರ್ ರೋಗಿಗಳಿಗೆ ಔಷಧಿ, ಚಿಕಿತ್ಸೆಯ ಅವರಿಗೆ ಸಾಂತ್ವನ, ಆಪ್ತಸಲಹೆಯ ಅಗತ್ಯತೆ ಇದೆ. ಕ್ಯಾನ್ಸರ್‍ ಒಬ್ಬರಿಗೆ ಬಂದರೂ ಇಡೀ ಕುಟುಂಬ ಭಾವನಾತ್ಮಕ, ಆರ್ಥಿಕ ಸಂಕಷ್ಟ ಅನುಭವಿಸುವುದನ್ನು ನಿತ್ಯವೂ ನೋಡುತ್ತೇವೆ. ಕ್ಯಾನ್ಸರ್ ಕಾಯಿಲೆ ಉಳ್ಳವರನ್ನು ಆರೈಕೆ ಮಾಡುತ್ತಿರುವವರಿಗೆ ಭಾವನಾತ್ಮಕ ಬೆಂಬಲ ನೀಡುವ ಕೆಲಸ ಎಷ್ಟು ಮಾಡಿದರೂ ಬೇಕು.ಅಂತಹ ಅತ್ಯಂತ ಅಗತ್ಯದ, ಮಹತ್ವದ ಕೆಲಸವನ್ನು ತಮ್ಮದೇ ಅನುಭವ, ಅಂತ:ಕರಣಗಳ ಮೂಲಕ ಮಾಡಲು ಹೊರಟಿರುವ ಲಕ್ಷೀಶ ಫೌಂಡೇಷನ್ ಕೆಲಸ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.

ನಂತರ ಮಾತನಾಡುತ್ತಾ ಲಕ್ಷ್ಮೀಶ ಫೌಂಡೇಶನ್ ಸಂಸ್ಥಾಪಕಿ ಉಷಾ ನಾರಾಯಣ ಅವರು ತಮ್ಮ ಪತಿ ಲಕ್ಷ್ಮೀ ನಾರಾಯಣ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವಾಗ ತೋರಿದ ಮಾನಸಿಕ ಸ್ಥೈರ್ಯ ಹಾಗೂ ಸೇವಾ ಮನೋಭಾವವನ್ನು ಹೊಗಳಿದರು. ಮಹೋನ್ನತ ಆಶಯದೊಂದಿಗೆ ಆರಂಭವಾಗಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ‘ಲಕ್ಷ್ಮೀಶ ಫೌಂಡೇಷನ್’ ವೆಬ್ ಸೈಟ್‍ಕೂಡಾ ಅನಾವರಣಗೊಳಿಸಲಾಯಿತು.

ಕಲಾದೇಗುಲ ಶ್ರೀನಿವಾಸ ಅವರ ನಿರೂಪಣೆ ಕಾರ್ಯಕ್ರಮದಲ್ಲಿತ್ತು. ಲಕ್ಷ್ಮೀಶ ಫೌಂಡೇಷನ್ ಕಾರ್ಯದರ್ಶಿ ಮೋಹನ್‍ ಕುಮಾರ್ ಸ್ವಾಗತಿಸಿದರು. ಲಕ್ಷೀಶ ಫೌಂಡೇಷನ್‍ಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡಿ ಸಹಾಯ ಹಸ್ತ ಚಾಚಿದ ಎಸ್. ಮಂಜುನಾಥ್‍ ಅವರನ್ನೂ ಇದೇ ಸಂದರ್ಭದಲ್ಲಿ ವಂದಿಸಿ, ಗೌರವಿಸಲಾಯಿತು. ವಿದುಷಿ ಶ್ರೀಮತಿ ಸಂಧ್ಯಾ ನಾಗರಾಜ್‍ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

In News:

www.vydyaloka.in

www.kolaravani.com

Leave a Reply

Your email address will not be published. Required fields are marked *